ಬಂಧು-ಮಿತ್ರರೇ..ತಮಗೆಲ್ಲರಿಗೂ ನಮ್ಮೂರಿಗೆ ಆದರದ ಸ್ವಾಗತ....

Heartly welcome you the people to OUR BARAYAKANYADY....

About us

About us

About us

******
****


* Praveenbk.lingayat, editor & publisher

* Shivaprasad.b.k.lingayat, co-operator

* Barayakanyady-I village, 
Belthangady Taluk,
D.kannada Dist,
Karnataka State, India.
 
* E-mail : barayakanyady@gmail.com.

* Webpage: http://barayakanyady.blogspot.in





****
* *****

ಹುಲಿಯ ಆರ್ಭಟಕ್ಕೆ ಒಂದು ಗಾಯ,ಐದು ಪಾರು

                        ಬ.ಕನ್ಯಾಡಿ : ಪ್ರತೀ ದಿನದಂತೆ ಮುಂಜಾನೆ ಎದ್ದು ಹಟ್ಟಿ ಸೊಪ್ಪಿಗೆ ಹೋಗುತ್ತಿದ್ದ ಬರಾಯ ಕನ್ಯಾಡಿಯ ಯುವತಿಯೊಬ್ಬರು ಮನೆಯ ಹತ್ತಿರದ ಕಾಡಿನಲ್ಲಿ ಬೆಳಿಗ್ಗೆ ೭ ಗಂಟೆಗೆ ಹುಲಿಯ ಘರ್ಜನೆಯನ್ನು ಕೇಳಿ ಓಡಿ ಬಂದು ಅಪಾಯಕ್ಕೊಳಗಾದ ಘಟನೆ ದಿ.೧-೦೩-೨೦೧೨ ರಂದು ಗುರುವಾರ ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ೬ ಜನರು ಪಾಲ್ಗೊಂಡಿದ್ದು ಇದರಲ್ಲಿ ಇಬ್ಬರು ಸಣ್ಣ ಮಕ್ಕಳು ಸೇರಿದ್ದರು. ಆದರೆ ಇವರೆಲ್ಲರೂ ಅಪಾಯದಿಂದ ಪಾರಾಗಿದ್ದು. ಮಹಿಳೆ ಪುಷ್ಪರವರು ಹೆದರಿ ಓಡಿ ಬಂದಿದ್ದು ತಲೆಗೆ ತೀರಾ ಗಾಯವಾಗಿ ಇಂದು ಬೆಳಿಗ್ಗೆ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆದುಕೊಂಡರು. ಘಟನೆಯ ಹಿನ್ನಲೆ : ಸು. ಮೂರು ನಾಲ್ಕು ತಿಂಗಳುಗಳಿಂದೀಚೆಗೆ ಈ ಗ್ರಾಮದ ಮೂರು ಕಡೆಗಳಲ್ಲಿ ಹುಲಿಯ ಕಾಟ ಹೆಚ್ಚಾಗಿದೆ. ಮೂರೂ ಗುಡ್ಡದಲ್ಲಿ ಮೂರು ಹುಲಿಗಳು ವಾಸವಾಗಿ ಮೂರೂ ಕಡೆಯಲ್ಲೂ ಏಕಕಾಲದಲ್ಲಿ ಕೂಗುವ ಶಬ್ದಗಳು ಕೇಳಿಬರುತ್ತಿದ್ದು. ಊರಿನ ಜನರು ಮನೆಯೆಂಬ ಜೈಲಿನಲ್ಲಿ ಸೇರಬೇಕಾಗಿದೆ.ಮಕ್ಕಳೆಂತು ಮನೆಯಿಂದ ಶಾಲೆಗೆ ಹೊರಡುವುದೇ ಕನಸಿನ ಮಾತಾಗಿದೆ. ಈ ಊರಿನಲ್ಲಿ ಕಳೆದ ಮೂರು ನಾಲ್ಕು ತಿಂಗಳುಗಳಿಂದ ೩ ನಾಯಿಗಳು ಹುಲಿಯ ಪಾಲಾಗಿದ್ದರೆ ೩ ನಾಯಿಗಳು ಹುಲಿಯ ಬಾಯಿಯಿಂದ ತಪ್ಪಿಸಿಕೊಂಡು ತನ್ನ ಸಾಹಸ ಮೆರೆದ್ದಿದ್ದಾವೆ. ಊರಿನವರ ಅಭಿಪ್ರಾಯ : ಬರಾಯಕನ್ಯಾಡಿ ಗ್ರಾಮದ ಕನ್ಯಾಡಿ(ಕಜೆ ಕನ್ಯಾಡಿ) ವಲಯದಲ್ಲಿ ಕಂಡು ಬರುವ ಪಿಲಿಚಾಮುಂಡಿ ದೈವದ ಹುಲಿಯೊಂದು ಈ ನಾಡಿನಲ್ಲಿ ವಾಸವಾಗಿರುತ್ತಿತ್ತು. ಅದು ದೈವದ ಭಂಡಾರ ಹೋಗುವ ಸಮಯದಲ್ಲಿ ಎಲ್ಲರ ಹಿಂದೆ ನಡೆದು ಬರುತ್ತಿತ್ತು, ಅದನ್ನು ನಾವು ನೋಡಿರುವುದಾಗಿ ಕೆಲವು ಹಿರಿಯರು ಅಭಿಪ್ರಾಯಪಡುತ್ತಾರೆ. ಅಲ್ಲದೇ ಇದೇ ತಿಂಗಳ ೨೦ರಂದು ಇಲ್ಲಿನ ದೈವದ ನೇಮ ನಡೆಯಲಿದ್ದು. ಈ ಸಂದರ್ಭದಲ್ಲಿ ಹುಲಿಯ ಕಾಟ ಪ್ರತೀವರ್ಷ ಸಾಮಾನ್ಯವಾಗಿರುತ್ತದೆ,ಆದರೆ ಈ ವರ್ಷ ಮಾತ್ರ ಸ್ವಲ್ಪ ಜಾಸ್ತಿಯಾಗಿದೆ. ಎಂದು ಇನ್ನುಕೆಲವರು ಅಭಿಪ್ರಾಯ ಪಡುತ್ತಾರೆ. ಒಟ್ಟಾಗಿ ಈ ಎಲ್ಲಾ ಹುಲಿಗಳು ಸಂಜೆ ೬ ಗಂಟೆಯಿಂದ ಬೆಳಿಗ್ಗೆ ಸುಮಾರು ೮ ಗಂಟೆಯವರೆಗೆ ಜೋರಾಗಿ ಕಿರುಚುತ್ತಿದ್ದು ಊರಿನ ಜನರೂ ಮಕ್ಕಳೂ ರಾತ್ರಿಯಿಡೀ ನಿದ್ರೆಯಿಲ್ಲದೆ ತೀರಾ ಕಂಗಲಾಗಿದ್ದಾರೆ. ವರದಿ-ಪ್ರವೀಣ್ ಚಂದ್ರ ಬರಾಯಕನ್ಯಾಡಿ

ಬರಾಯ ಕನ್ಯಾಡಿ-I ¤ ಮಾರ್ಗಸೂಚಿ

ಬರಾಯ ಕನ್ಯಾಡಿ-I ¤ ಮಾರ್ಗಸೂಚಿ

ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬರಾಯಕನ್ಯಾಡಿ-I ಎಂಬ ಗ್ರಾಮವು 'ಬರಾಯ' ಮತ್ತು ಕನ್ಯಾಡಿ' ಎಂಬ ಎರಡು ಪ್ರದೇಶಗಳಿಂದ ಒಂದುಗೂಡಿದೆ. ಗುರಿಪಳ್ಳ, ದೊಂಪದ ಪಲ್ಕೆ, ಬರಾಯ ಎಂಬ ಪ್ರದೇಶಗಳು ಬರಾಯ ಎಂಬ ಹೆಸರಾಂತ ಪ್ರದೇಶಕ್ಕೆ ಸೇರಿದರೆ, ಕನ್ಯಾಡಿ, ಗೋಲ್ದೊಟ್ಟು, ಎನಿರುಪಲ್ಕೆ(ಎನ್ರಲ್ಕೆ ಎಂದೂ ಕರೆಯುತ್ತಾರೆ)ಗಳು , ಕನ್ಯಾಡಿ ಎಂದೇ ಹೆಸರಾಗಿದೆ.ದೇರ್ಲಕ್ಕಿ, ಪಡ್ಪು, ಈ ೨ಪ್ರದೇಶಗಳು ನಡ ಕನ್ಯಾಡಿ ಎಂದೇ ಪ್ರಸಿದ್ದವಾಗಿದೆ. ಒಟ್ಟಾರೆಯಾಗಿ ಈ ಗ್ರಾಮಕ್ಕೆ ಸುತ್ತಮುತ್ತಲಿನ ಪ್ರದೇಶವನ್ನು ಕೂಡಿಸಿ ಕಜೆ ಕನ್ಯಾಡಿ,ಇಂದಬೆಟ್ಟು ಕನ್ಯಾಡಿ,ಬರಾಯ ಕನ್ಯಾಡಿ, ನಡ ಕನ್ಯಾಡಿ, ಲಾಯಿಲ ಕನ್ಯಾಡಿ ಎಂದು ಅನೇಕ ಹೆಸರಿನಿಂದ ಕರೆಯುತ್ತಾರೆ. ಈ ಪ್ರದೇಶಕ್ಕೆ ಯಾವಕಡೆಯಿಂದ ಬರಲು ಹತ್ತಿರ ಎಂದು ಆ ಹೆಸರುಗಳೇ ತಿಳಿಸುತ್ತದೆ, ಉದಾ: ನಡ ಕನ್ಯಾಡಿಗೆ ಬರಲು ನಡ ಗ್ರಾಮಕ್ಕೆ ಹಾದು ಹೋಗಬಹುದು.
ಬರಾಯ ಕನ್ಯಾಡಿಗೆ ಪ್ರಮುಖ ರಸ್ತೆಗಳು :


¤ ಉಜಿರೆ-(ಕಜೆ-ಕನ್ಯಾಡಿ ಅಡ್ಡ ರಸ್ತೆ,ಶಾಂತಿನಗರ) ಕೊಲ್ಲಿ,
¤ ಉಜಿರೆ-(ಗುರಿಪಳ್ಳ ಕನ್ಯಾಡಿ)ಕೊಲ್ಲಿ
¤ ಬೆಳ್ತಂಗಡಿ-ಕೇಳ್ತಾಜೆ(ನಡಕನ್ಯಾಡಿ)-ಕಾಜೂರು .

ಊರಗೌಡ ಕೆಂಪಮಲ್ಲಯ್ಯ:



ಬರಾಯಕನ್ಯಾಡಿ ಗ್ರಾಮದ ಕನ್ಯಾಡಿ ವಲಯ(ಬೈಲ್)ದಲ್ಲಿ ಒಂದು ಪ್ರಸಿದ್ಧ ಇತಿಹಾಸವಿರುವ ದೊಡ್ಡ ಬೆಟ್ಟವಿದೆ. ಇದನ್ನು 'ಪಿಲಿಂಗಾಲ್ ಗುಡ್ಡೆ' ಎಂದು ಕರೆಯುತ್ತಾರೆ. ತುಳು ಭಾಷೆಯ ಈ ಹೆಸರು ಪಿಲಿ ಮತ್ತು ಆಂಗಾರ್ ಎಂಬ ಎರಡು ಶಬ್ದದಿಂದ ವ್ಯುತ್ಪತಿ ಹೊಂದಿದೆ. ತುಳು ಭಾಷೆಯಲ್ಲಿ ಪಿಲಿ ಅಂದರೆ ಕನ್ನಡದಲ್ಲಿ ಹುಲಿ, ಆಂಗಾರ್(ಆಂಗರುನಾ) ಅಂದರೆ ಕಾಯುವುದು ಎಂದರ್ಥ ಹಾಗೆಯೇ ಗುಡ್ಡೆ ಎಂದರೆ ಕಾಡು, ಬೆಟ್ಟ ಎಂದರ್ಥ. ಅಂದರೆ ಒಟ್ಟಾಗಿ ಈ ಊರನ್ನು ಕಾಯುತ್ತಿದ್ದ ಬೃಹದ್ಧಾಕಾರದ ಪಿಲಿಚಾಮುಂಡಿ ದೈವದ ಹುಲಿಯೊಂದು ವಾಸವಾಗಿತ್ತು. ಆದ್ದರಿಂದ ಆ ಬೆಟ್ಟಕ್ಕೆ ಪಿಲಿಂಗಾರ್ ಗುಡ್ಡೆ ಎಂಬ ಹೆಸರು ಬಂತು ನಂತರ ಕ್ರಮೇಣ ಅದು ಪಿಲಿಂಗಾಲ್ ಗುಡ್ಡೆ ಎಂದು ಬದಲಾಯಿತು.ಈ ಬೆಟ್ಟವು ಕನ್ಯಾಡಿ ಬೈಲಿನ ಅತೀ ಎತ್ತರದ ಪರ್ವತವಾಗಿದೆ. ವರ್ಷಪೂರ್ತಿ ಅಚ್ಚಹಸಿರಿನಿಂದ ಊರನ್ನು ನೋಡುತ್ತಿದೆ. ನೋಡುವವರಿಗೆ ಅತೀ ಎತ್ತರವಾಗಿ ಇದೊಂದು ಅಚ್ಚರಿಯಂತೆ ಕಾಣಿಸುತ್ತದೆ. ಊರ ಯಾವ ಮೂಲೆಗೆ ಹೋದರೂ ಇದು ಅತೀ ಎತ್ತರದಲ್ಲಿ ಕಾಣಿಸುತ್ತದೆ. ಈ ಹುಲಿಗೆ ಅದರದ್ದೇ ಆದ ಐತಿಹ್ಯವಿದೆ. ಸು.೨೦೦ ವರ್ಷಗಳ ಹಿಂದೆ ಈ ವಲಯ ಜೈನ ಮನೆತನದ ಕೆಂಪಮಲ್ಲಯ್ಯರವರಿಗೆ ಸೇರಿತ್ತು. ಅವರ ಮನೆ ಈಗ ಅಸ್ತಿತ್ವದಲ್ಲಿರುವ ಅಂಡಿರ್ಮಾರ್ ಮನೆಯ ಹತ್ತಿರವಿರುವ ಊರಿನ ಪಿಲಿಚಾಮುಂಡಿ ದೈವದ ತಾಣದ ಆಗ್ನೇಯ ಭಾಗಲ್ಲಿತ್ತು. ಆ ಮನೆಗೆ "ಸುತ್ತು ಪಡ್ಪುದ ಇಲ್ಲ್" (ಸುತ್ತು ಪಡ್ಪಿನ ಮನೆ) ಎಂದು ಕರೆಯುತ್ತಾರೆ. ಅಂದರೆ ಆ ಮನೆಯು ಸುತ್ತ ಜಗುಲಿಗಳಿಂದ ಕೂಡಿತ್ತು. ಅವರ ಮಾತುಕತೆಗಳೆಲ್ಲ ಅಲ್ಲಿಯೇ ನಡೆಯುತ್ತಿತ್ತು.(೫ ವರ್ಷದ ಹಿಂದೆ ಮೈದಾನ ಅಲೀಕರಣದ ಉದ್ದೇಶದಿಂದ ಅದರ ಪಂಚಾಂಗಲನ್ನು ಕಿತ್ತೆಸೆಯಲಾಗಿದೆ). ಅವರ ಮರಣದ ಕಾಲದ ಬಗ್ಗೆ ಪುರಾವೆಗಳು ದೊರೆತಿಲ್ಲ.. ಆದರೆ ಅವರ ಸಮಾಧಿ (ಗೋರಿ) ಈಗ ಮಾಲ್ದಂಡ ಎಂಬ ಮನೆಯವರಿಗೆ ಸೇರಿದ ಗದ್ದೆಯ ಮದ್ಯದಲ್ಲಿ ಪಿಲಿಚಾಮುಂಡಿ ದೈವಸ್ಥಾನ ಮತ್ತು ಅವರ ಮನೆಯ ಪೂರ್ವಾಭಿಮುಖದಲ್ಲಿದೆ. ಈ ಗದ್ದೆಗೆ "ದೂಪೆದ ಕಂಡ" ಎಂದು ಕರೆಯುತ್ತಾರೆ. ತುಳುವಲ್ಲಿ ದೂಪೆ ಅಂದರೆ ಗೋರಿ ಅಥವಾ ಸಮಾಧಿ ಎಂದರ್ಥ, ಕಂಡ ಅಂದರೆ ಗದ್ದೆ ಎಂದರ್ಥ. ಈ ಗದ್ದೆಗೆ ಯಾವುದೇ ಸೂತಕದವರು, ಮಾಸವೃತ್ತದಲ್ಲಿರುವ ಮಹಿಳೆಯರು ಇಳಿಯುವಂತಿಲ್ಲ ಮಾತ್ರವಲ್ಲ ಅದರ ಬದುವಿನಲ್ಲಿ ಹೋಗುವುದು ಕೂಡಾ ನಿಷಿದ್ಧ. ಅಲ್ಲಿ ಪ್ರವೇಶಿಸಿದವರಿಗೆ ಈಗಾಗಲೇ ಅನೇಕ ಭಾರಿ ನಾಗರ ಹಾವು ಕಾಣಿಸಿದೆ, ಕಾಣಿಸ್ತಲೂ ಇದೆ. ಕೆಂಪಮಲ್ಲಯ್ಯರವರು ಈ ಊರಿನಲ್ಲಿ ಆಡಳಿತ ನಡೆಸುತ್ತಿರುವಾಗ ಈ ಪಿಲಿಚಾಮುಂಡಿ ದೈವದ ಹುಲಿಯೊಂದಿತ್ತಂತೆ. ಅವರು ಕೆಲವೊಮ್ಮೆ ತನ್ನ ಕೋರ್ಟು ಕಛೇರಿಗಳ ಕೆಲಸಕ್ಕೆ ಹೋಗುಲಾಗ ಆ ಹುಲಿಯಲ್ಲಿ ಮನೆಕಾಯಲು ಹೇಳಿ ಹೋಗುತ್ತಿದ್ದರು. ಅದು ತನ್ನ ಪಾಲಿನ ಕರ್ತವ್ಯವನ್ನು ನಿರ್ವಹಿಸುತ್ತಿತ್ತು. ಅವರ ಕಾಲದಲ್ಲಿ ಪಿಲಿಂಗಾಲ್ ಗುಡ್ಡೆಯ ತುದಿಯಲ್ಲಿ ಒಂದು ದೊಡ್ಡ ದೈವದ ತಾಣವಿತ್ತು. ವರ್ಷದ ಮಾರ್ಚ್ ಎಪ್ರಿಲ್ ತಿಂಗಳಲ್ಲಿ ಅಂಡಿರ್ಮಾರ ತಾಣದಿಂದ ಪಿಲಿಂಗಾಲ್ ಗುಡ್ಡೆ ತಾಣಕ್ಕೆ ದೈವದ ಭಂಡಾರ ಹೋಗುತ್ತಿತ್ತು. ಆಗ ಆ ಹುಲಿಯೂ ಎಲ್ಲರೊಂದಿಗೆ ಹಿಂದಿನಿಂದ ನಡೆದು ಬರುತ್ತಿತ್ತು. ಈ ಹುಲಿ ಯಾರಿಗೂ ಏನೂ ಮಾಡುತ್ತಿರಲಿಲ್ಲ. ಊರನ್ನು ಕಾಯುವುದು ಅದರ ಮುಖ್ಯ ಕರ್ತವ್ಯವಾಗಿತ್ತು. ಮುಂದೆ ಕೆಲವು ವರ್ಷಗಳ ನಂತರ ಇಬ್ಬರು ಶಿಕಾರಿಯವರಿಂದ ಗಂಡಿಕುಕ್ಕು ಎಂಬಲ್ಲಿ ಆ ಹುಲಿಯು ಬಲಿಯಾಯಿತು. ಈ ಘಟಣೆಯ ಮೂರು ದಿನಗಳ ಬಳಿಕ ಅವರಿಬ್ಬರೂ ಮೈಗೆ ವಿಷವೇರಿ ಮರಣ ಹೊಂದಿದರು.

ಪಿಲಿಂಗಾಲ್ ಗುಡ್ಡೆ:

ಬರಾಯಕನ್ಯಾಡಿ ಗ್ರಾಮದ ಕನ್ಯಾಡಿ ವಲಯ(ಬೈಲ್)ದಲ್ಲಿ ಒಂದು ಪ್ರಸಿದ್ಧ ಇತಿಹಾಸವಿರುವ ದೊಡ್ಡ ಬೆಟ್ಟವಿದೆ. ಇದನ್ನು 'ಪಿಲಿಂಗಾಲ್ ಗುಡ್ಡೆ' ಎಂದು ಕರೆಯುತ್ತಾರೆ. ತುಳು ಭಾಷೆಯ ಈ ಹೆಸರು ಪಿಲಿ ಮತ್ತು ಆಂಗಾರ್ ಎಂಬ ಎರಡು ಶಬ್ದದಿಂದ ವ್ಯುತ್ಪತಿ ಹೊಂದಿದೆ. ತುಳು ಭಾಷೆಯಲ್ಲಿ ಪಿಲಿ ಅಂದರೆ ಕನ್ನಡದಲ್ಲಿ ಹುಲಿ, ಆಂಗಾರ್(ಆಂಗರುನಾ) ಅಂದರೆ ಕಾಯುವುದು ಎಂದರ್ಥ ಹಾಗೆಯೇ ಗುಡ್ಡೆ ಎಂದರೆ ಕಾಡು, ಬೆಟ್ಟ ಎಂದರ್ಥ. ಅಂದರೆ ಒಟ್ಟಾಗಿ ಈ ಊರನ್ನು ಕಾಯುತ್ತಿದ್ದ ಬೃಹದ್ಧಾಕಾರದ ಪಿಲಿಚಾಮುಂಡಿ ದೈವದ ಹುಲಿಯೊಂದು ವಾಸವಾಗಿತ್ತು. ಆದ್ದರಿಂದ ಆ ಬೆಟ್ಟಕ್ಕೆ ಪಿಲಿಂಗಾರ್ ಗುಡ್ಡೆ ಎಂಬ ಹೆಸರು ಬಂತು ನಂತರ ಕ್ರಮೇಣ ಅದು ಪಿಲಿಂಗಾಲ್ ಗುಡ್ಡೆ ಎಂದು ಬದಲಾಯಿತು.
ಈ ಬೆಟ್ಟವು ಕನ್ಯಾಡಿ ಬೈಲಿನ ಅತೀ ಎತ್ತರದ ಪರ್ವತವಾಗಿದೆ. ವರ್ಷಪೂರ್ತಿ ಅಚ್ಚಹಸಿರಿನಿಂದ ಊರನ್ನು ನೋಡುತ್ತಿದೆ. ನೋಡುವವರಿಗೆ ಅತೀ ಎತ್ತರವಾಗಿ ಇದೊಂದು ಅಚ್ಚರಿಯಂತೆ ಕಾಣಿಸುತ್ತದೆ. ಊರ ಯಾವ ಮೂಲೆಗೆ ಹೋದರೂ ಇದು ಅತೀ ಎತ್ತರದಲ್ಲಿ ಕಾಣಿಸುತ್ತದೆ.

ಈ ಹುಲಿಗೆ ಅದರದ್ದೇ ಆದ ಐತಿಹ್ಯವಿದೆ. ಸು.೨೦೦ ವರ್ಷಗಳ ಹಿಂದೆ ಈ ವಲಯ ಜೈನ ಮನೆತನದ ಕೆಂಪಮಲ್ಲಯ್ಯರವರಿಗೆ ಸೇರಿತ್ತು. ಅವರ ಮನೆ ಈಗ ಅಸ್ತಿತ್ವದಲ್ಲಿರುವ ಅಂಡಿರ್ಮಾರ್ ಮನೆಯ ಹತ್ತಿರವಿರುವ ಊರಿನ ಪಿಲಿಚಾಮುಂಡಿ ದೈವದ ತಾಣದ ಆಗ್ನೇಯ ಭಾಗಲ್ಲಿತ್ತು. ಆ ಮನೆಗೆ "ಸುತ್ತು ಪಡ್ಪುದ ಇಲ್ಲ್" (ಸುತ್ತು ಪಡ್ಪಿನ ಮನೆ) ಎಂದು ಕರೆಯುತ್ತಾರೆ. ಅಂದರೆ ಆ ಮನೆಯು ಸುತ್ತ ಜಗುಲಿಗಳಿಂದ ಕೂಡಿತ್ತು. ಅವರ ಮಾತುಕತೆಗಳೆಲ್ಲ ಅಲ್ಲಿಯೇ ನಡೆಯುತ್ತಿತ್ತು.(೫ ವರ್ಷದ ಹಿಂದೆ ಮೈದಾನ ಅಲೀಕರಣದ ಉದ್ದೇಶದಿಂದ ಅದರ ಪಂಚಾಂಗಲನ್ನು ಕಿತ್ತೆಸೆಯಲಾಗಿದೆ). ಅವರ ಮರಣದ ಕಾಲದ ಬಗ್ಗೆ ಪುರಾವೆಗಳು ದೊರೆತಿಲ್ಲ.. ಆದರೆ ಅವರ ಸಮಾಧಿ (ಗೋರಿ) ಈಗ ಮಾಲ್ದಂಡ ಎಂಬ ಮನೆಯವರಿಗೆ ಸೇರಿದ ಗದ್ದೆಯ ಮದ್ಯದಲ್ಲಿ ಪಿಲಿಚಾಮುಂಡಿ ದೈವಸ್ಥಾನ ಮತ್ತು ಅವರ ಮನೆಯ ಪೂರ್ವಾಭಿಮುಖದಲ್ಲಿದೆ. ಈ ಗದ್ದೆಗೆ "ದೂಪೆದ ಕಂಡ" ಎಂದು ಕರೆಯುತ್ತಾರೆ. ತುಳುವಲ್ಲಿ ದೂಪೆ ಅಂದರೆ ಗೋರಿ ಅಥವಾ ಸಮಾಧಿ ಎಂದರ್ಥ, ಕಂಡ ಅಂದರೆ ಗದ್ದೆ ಎಂದರ್ಥ. ಈ ಗದ್ದೆಗೆ ಯಾವುದೇ ಸೂತಕದವರು, ಮಾಸವೃತ್ತದಲ್ಲಿರುವ ಮಹಿಳೆಯರು ಇಳಿಯುವಂತಿಲ್ಲ ಮಾತ್ರವಲ್ಲ ಅದರ ಬದುವಿನಲ್ಲಿ ಹೋಗುವುದು ಕೂಡಾ ನಿಷಿದ್ಧ. ಅಲ್ಲಿ ಪ್ರವೇಶಿಸಿದವರಿಗೆ ಈಗಾಗಲೇ ಅನೇಕ ಭಾರಿ ನಾಗರ ಹಾವು ಕಾಣಿಸಿದೆ, ಕಾಣಿಸ್ತಲೂ ಇದೆ.

ಕೆಂಪಮಲ್ಲಯ್ಯರವರು ಈ ಊರಿನಲ್ಲಿ ಆಡಳಿತ ನಡೆಸುತ್ತಿರುವಾಗ ಈ ಪಿಲಿಚಾಮುಂಡಿ ದೈವದ ಹುಲಿಯೊಂದಿತ್ತಂತೆ. ಅವರು ಕೆಲವೊಮ್ಮೆ ತನ್ನ ಕೋರ್ಟು ಕಛೇರಿಗಳ ಕೆಲಸಕ್ಕೆ ಹೋಗುಲಾಗ ಆ ಹುಲಿಯಲ್ಲಿ ಮನೆಕಾಯಲು ಹೇಳಿ ಹೋಗುತ್ತಿದ್ದರು. ಅದು ತನ್ನ ಪಾಲಿನ ಕರ್ತವ್ಯವನ್ನು ನಿರ್ವಹಿಸುತ್ತಿತ್ತು. ಅವರ ಕಾಲದಲ್ಲಿ ಪಿಲಿಂಗಾಲ್ ಗುಡ್ಡೆಯ ತುದಿಯಲ್ಲಿ ಒಂದು ದೊಡ್ಡ ದೈವದ ತಾಣವಿತ್ತು. ವರ್ಷದ ಮಾರ್ಚ್ ಎಪ್ರಿಲ್ ತಿಂಗಳಲ್ಲಿ ಅಂಡಿರ್ಮಾರ ತಾಣದಿಂದ ಪಿಲಿಂಗಾಲ್ ಗುಡ್ಡೆ ತಾಣಕ್ಕೆ ದೈವದ ಭಂಡಾರ ಹೋಗುತ್ತಿತ್ತು. ಆಗ ಆ ಹುಲಿಯೂ ಎಲ್ಲರೊಂದಿಗೆ ಹಿಂದಿನಿಂದ ನಡೆದು ಬರುತ್ತಿತ್ತು. ಈ ಹುಲಿ ಯಾರಿಗೂ ಏನೂ ಮಾಡುತ್ತಿರಲಿಲ್ಲ. ಊರನ್ನು ಕಾಯುವುದು ಅದರ ಮುಖ್ಯ ಕರ್ತವ್ಯವಾಗಿತ್ತು.
ಮುಂದೆ ಕೆಲವು ವರ್ಷಗಳ ನಂತರ ಇಬ್ಬರು ಶಿಕಾರಿಯವರಿಂದ ಗಂಡಿಕುಕ್ಕು ಎಂಬಲ್ಲಿ ಆ ಹುಲಿಯು ಬಲಿಯಾಯಿತು. ಈ ಘಟಣೆಯ ಮೂರು ದಿನಗಳ ಬಳಿಕ ಅವರಿಬ್ಬರೂ ಮೈಗೆ ವಿಷವೇರಿ ಮರಣ ಹೊಂದಿದರು.